ಕನ್ನಡ ಪುಟಗಳು
ಹುಡುಗರ ಆಟ
ಇವಳ ಮುಖ ಬಲು ದುಂಡು
ಇವಳ ಹಿಂದೆ ಸದಾ ಹುಡುಗರ ದಂಡು
ಮಾಯವಗುವಳು ಹುಡುಗರನು ಕಂಡು
ಆದರು ಬಿಡಲಿಲ್ಲ ಹುಡುಗರ ಹಿಂಡು
-Vರ ( Venkatesha ರಂಗಯ್ಯ )
ಬರಹ ಹೇಳಿಕೊಡಿ, ನುಡಿ ಬೇಡ.. !
ಕನ್ನಡದ ಮಕ್ಕಳಿಗೆ, ಅಂದರೆ ಅಚ್ಚಕಟ್ಟಾಗಿ ಕನ್ನಡ ಮಾಡುವ ಮಕ್ಕಳಿಗೆ ಶಾಲೆಯಲ್ಲಿ ಕನ್ನಡ ಎಂಬ ಒಂದು ವಿಶಯವೇ ಬೇಡ.
ಮಕ್ಕಳಿಗೆ ಬರೀ ಕನ್ನಡಲಿಪಿಯನ್ನು ಕಲಿಸಿದರೆ ಸಾಕು... ಅಂದರೆ ಮಕ್ಕಳು ತಾವು ಏನು ಮಾತಾಡುತ್ತಾರೋ ಅದನ್ನು ಬರೆಯಲು ಬಂದರೆ ಸಾಕು... ಮುಂದೆ ಓದಿ »
ಹಸಿ ಹಸಿ ಪ್ರೀತಿ
ಮನಸಿಂದು ಹಸಿಯಾಗಿದೆ
ಪ್ರೀತಿ ಮೊಳೆತಾಗಿದೆ
ಮನಸು ಬೆರೆತಾಗಿದೆ
ಮಾತು ಈಗ ಶುರುವಾಗಿದೆ
ಮೌನ ಓಡಿ ಹೋಗಿದೆ
ಹೃದಯದಲ್ಲಿ ಪ್ರೀತಿ ಇಮ್ಮಡಿಯಾಗಿದೆ.
-Vರ ( Venkatesha ರಂಗಯ್ಯ )
ಓದಿದ್ದು ಕೇಳಿದ್ದು ನೋಡಿದ್ದು-1
ಚೀನಾಗೆ ನೂರು, ಭಾರತಕ್ಕೇಕೆ ಮೂರು?
ಒಲಿಂಪಿಕ್ಸಿನಲ್ಲಿ ಭಾರತದ ಸಾಧನೆ ಬಗ್ಗೆ ವಿಜಯ ಕರ್ನಾಟಕದಲ್ಲಿ ಬರಹವಿದೆ.
"ಒಲಿಂಪಿಕ್ಸ್ ಪದಕ ಗೆಲ್ಲುವುದೆಂದರೆ ಅದು ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಸ್ಥಾನಗಿಟ್ಟಿಸಿದಂತಲ್ಲ! "
-------------------------------------------------------------------------------------------
ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ
ನೆಲ್ಲಿಕೆರೆ ವಿಜಯಕುಮಾರ್ ಮುಂದೆ ಓದಿ »
ಮರಳು ಭೂಮಿ ಮತ್ತು ಮೌನ
ಈಜಿಪ್ಟ್ ಎಂದರೆ ನೈಲ್ ನದಿ, ಪಿರಮಿಡ್ಡುಗಳು, ಪುರಾತನ ಕಾಲದಿಂದಲೂ ಬಂದ ಪರಂಪರೆ ಎಂಬುದು ಎಲ್ಲರ ಮನಸ್ಸಿಗೆ ಬರಬಹುದಾದ ಅಂಶ. ಸುಮಾರು USA ಭೂವಿಸ್ತಾರದಷ್ಟೇ ದೊಡ್ಡದಾದ ಸಹಾರ ಮರುಭೂಮಿ ಪ್ರಪಂಚದ ಅತಿದೊಡ್ಡ ಮರಳುಭೂಮಿ. ಕ್ರಿಸ್ತಪೂರ್ವ ೬೦೦೦ ವರ್ಷಗಳ ಹಿಂದಿನ ಉಲ್ಲೇಖಗಳು ಸಿಗುವಂತಹ ಈಜಿಪ್ಟ್ ಸಂಸ್ಕೃತಿಗೆ ಈ ಮರುಭೂಮಿಯ ಸಂಸ್ಕೃತಿ ಇನ್ನೂ ಹಳೆಯದು!
***
ಇದು ಮರುಭೂಮಿಯ ಕಥೆಯನ್ನಾಗಲೀ ಈಜಿಪ್ಟಿನ ಬಗ್ಗೆ ವ್ಯವಸ್ಥಿತವಾಗಿ ಹೇಳುವ ಪ್ರಯತ್ನವಂತೂ ಆಗಲಾರದು ಏಕೆಂದರೆ ಅವೆರೆಡನ್ನೂ ನಾನು ನೋಡೇ ಇಲ್ಲ, ಅನುಭವಿಸಿಯೂ ಇಲ್ಲ - ಟಿವಿ ಪರದೆಯ ಮೇಲೆ ನೋಡಿದ್ದನ್ನು ಹೊರತು ಪಡಿಸಿ. ಇನ್ನು ಭಾರತದ ಥಾರ್ ಮರುಭೂಮಿಯ ಬಗ್ಗೆ ಓದಿದ್ದೇನಾದರೂ ಕಣ್ಣಿಂದ ನೋಡಿದ್ದಂತೂ ಇಲ್ಲ. ಈ ಯುಎಸ್‌ಎ ಅಷ್ಟು ದೊಡ್ಡದಾದ ಮರಳುಗಾಡನ್ನು ಊಹಿಸಿಕೊಳ್ಳುತ್ತಾ ಹೋದಂತೆ, ಒಬ್ಬ ಪಶ್ಚಿಮದವನು ಮರುಭೂಮಿಯಲ್ಲಿ ನಡೆಯುತ್ತಾ ಅದರ ವೈಭವವನ್ನು ವರ್ಣಿಸುತ್ತಾ ಹೋದದ್ದನ್ನು ನೋಡಿದಂತೆ, ಸ್ಥಳೀಯ ಈಜಿಪ್ಟ್ ಮೂಲದವನು ಈ ಮರುಭೂಮಿ ಎಂಥವರನ್ನೂ ತಮ್ಮನ್ನು ಅವಿಷ್ಕರಿಸಿಕೊಳ್ಳಲು ಸಹಾಯಮಾಡುವುದು ಎಂಬ ಮಾತನ್ನು ಕೇಳಿದಂತೆ ನನ್ನ ಮನದಲ್ಲಿ ಮರುಭೂಮಿಯ ಬಗ್ಗೆ ಹೊಸದಾದ ಗೌರವ ಭಾವವೊಂದು ತಳೆಯತೊಡಗಿತು. ಈ ಸೃಷ್ಟಿಯಲ್ಲಿ ಮರುಭೂಮಿಯ ಪಾತ್ರವೂ ಇದೆ, ಅದಕ್ಕೂ ಒಂದು ನೆಲೆ ಇದೆ ಎನ್ನುವ ಆಲೋಚನೆ ಹೊಮ್ಮಿದ್ದು.
ಈ ಪ್ರಪಂಚದಲ್ಲಿ ಮೌನವಿದೆ, ಹುಡುಕಿಕೊಂಡು ಹೋಗಬೇಕಷ್ಟೇ. ಅದಕ್ಕೆ ಬೇಕು ಎರಡು ರೀತಿಯ ಪ್ರಯಾಣ - ಒಂದು ಅಂತರಾಳದ ಒಳಗೆ ಇನ್ನೊಂದು ಇರುವುದರೆಲ್ಲದರಿಂದ ದೂರ. ಇವೆರಡನ್ನೂ ಮಾಡಲು ದೂರವೆಲ್ಲೂ ಹೋಗಬೇಕಾದುದಿಲ್ಲ, ಮರುಭೂಮಿಯೂ ಬೇಡ ಬಯಲೂ ಬೇಡ, ಎಲ್ಲವೂ ನಮ್ಮೊಳಗೇ ಇದೆ. ಹಾಡುಹಗಲು ಎಂತಹ ಸಂತೆಯ ವಾತಾವರಣದಲ್ಲಿ ಕಣ್ಮುಚ್ಚಿ ಹಾಯಾಗಿ ನಿದ್ರೆ ಮಾಡುವವರಿಲ್ಲವೇನು? ಆದರೆ ನಮಗೆ ಅಂಟಿಕೊಂಡವುಗಳಿಂದ ’ದೂರ’ ಹೋಗುವುದು ಸರಳವಂತೂ ಅಲ್ಲ, ಅದಕ್ಕೆ ಬಹಳಷ್ಟು ಕಷ್ಟಪಡಬೇಕಾದ ಅಗತ್ಯವಿದೆ. ಈ ’ದೂರ’ ಹೋಗುವಿಕೆಗೆ ಅನುಕೂಲವಾಗಿ ಬರಬಹುದಾದ ಭೌತಿಕವಾಗಿ ಒಂದು ನೆಲೆಯಿಂದ ಮತ್ತೊಂದು ನೆಲೆಯಲ್ಲಿ ನಮ್ಮನ್ನು ಕಂಡುಕೊಳ್ಳಲು ಅನುವುಮಾಡಿಕೊಡುವಲ್ಲಿ ಮರುಭೂಮಿಯ ಪಾತ್ರವಂತೂ ಸ್ಪಷ್ಟವಾಯಿತು. ಇನ್ನು ಅಲ್ಲಿಗೆ ಹೋಗುವುದು ಹೇಗೆ ಅಲ್ಲಿ ಒಂದು ವಾರ ಕಳೆಯುವುದು ಹೇಗೆ ಎಂದೆಲ್ಲ ಯೋಚಿಸಿಕೊಂಡು ಬಾಯಿ ತುಟಿಯೊಣಗಿ ಹತ್ತಿರದ ನೀರಿನ ಬಾಟಲಿಯನೆತ್ತಿ ಮರುಭೂಮಿಯಲ್ಲಿ ನೀರು ಕುಡಿಯುವವರ ಹಾಗೆ ನೀರು ಕುಡಿದದ್ದಷ್ಟೇ ಬಂತು, ಆದರೆ ಅದು ಅಷ್ಟು ಸುಲಭವಂತೂ ಅಲ್ಲ.
***
ನಮ್ಮನ್ನಂಟಿದ ಸಂಕೋಲೆಗಳನ್ನೆಲ್ಲ ಬದಿಗೊತ್ತಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಮತ್ಯಾವುದೋ ದೇಶದವರಾದ ನಾವು ಹೋಗುವುದು ಬರುವುದು ಬಹಳ ದೂರದ ಮಾತು. ಐದು ವರ್ಷಗಳ ಹಿಂದೆ ಯೂರೋಪಿನಲ್ಲಿ ಕಳೆದ ಹನ್ನೆರಡು ದಿನಗಳನ್ನು ಇತ್ತೀಚಿನ ಸ್ಥಿತಿಗತಿಗಳಿಗೆ ಹೋಲಿಸಿಕೊಂಡು ನೋಡಿದಾಗ ಅದು ದೊಡ್ಡ ಸಾಹಸವೆಂದೇ ಕಂಡೀತು. ಇನ್ನು ನನಗೆ ಆಸಕ್ತಿ ತಂದ ಸಹಾರ ಮರುಭೂಮಿಯನ್ನು ನೋಡಿ ಅನುಭವಿಸುವುದು ಕನಸಿನ ಮಾತೇ. ಅದಕ್ಕೆಂದೇ ನಾನು ಟಿವಿ ಚಾನೆಲ್ಲುಗಳಿಗೆ ಪ್ರವಾಸಿ ಪುಸ್ತಕ/ವೆಬ್ ಸೈಟ್‌ಗಳಿಗೆ ಜೋತು ಬೀಳೋದು. ’ಕೋಶ ಓದು’ ಎನ್ನುವ ಮಾತಿನಲ್ಲಿ ಬಲವಿದೆ, ಬೆಂಬಲವಿದೆ. ನಾವು ಈಗಿರುವ ನೆಲೆಯಿಂದ ಹೊರಬಂದು ಮತ್ತಿನ್ಯಾವುದೋ ನೆಲೆಯಲ್ಲಿ ನಮ್ಮನ್ನವಿಷ್ಕರಿಸಿಕೊಂಡು ಎಲ್ಲವೂ ನೆಮ್ಮದಿಯಿದ್ದಾಗ ತಾನೇ ಆ ದಿವ್ಯ ಮೌನ ಹೊಮ್ಮೋದು? ಹಾಗಾಗಲೂ ಬಹಳ ಕಷ್ಟವಿದೆ, ದಿವ್ಯ ಮೌನ ಹೊಮ್ಮದಿರುವ ಮಾತಲ್ಲ ಅದಕ್ಕೆ ಮೊದಲಿನ ನೆಮ್ಮದಿಯ ಬಗ್ಗೆ. ನಮ್ಮ ಆಹಾರ ಆಚಾರ-ವಿಚಾರಗಳು ಭಿನ್ನ, ನಮ್ಮ ನಿಲುವು ನೋಟ ಭಿನ್ನ, ಈ ಭಿನ್ನತೆ ಮತ್ತೊಂದು ಅಗಾಧವಾದ ಸಂಸ್ಕೃತಿಯ ಮುಂದೆಯೂ ಎದ್ದು ಕಾಣುತ್ತದೆ. ಪ್ರವಾಸಿಗರಾಗಿ ಹೋದಲ್ಲಿ ನಾವು ನಮ್ಮತನವನ್ನು ಎತ್ತಿ ಗಂಟುಕಟ್ಟಿಕೊಂಡು ಹೋಗೋದೋ ಅಥವಾ ಹೋದಲ್ಲಿ ಬಂದಲ್ಲಿ ಅಲ್ಲಿಯವರಲ್ಲೊಂದಾಗಿ ಅವರ ಸ್ಥಳೀಯ ಅನುಭವಗಳಿಗೆ ಸ್ಪಂದಿಸುವುದೋ ಎನ್ನುವ ದ್ವಂದ್ವ ಎದುರಾಗುತ್ತದೆ. (ಭಾರತೀಯ ಮೂಲದ ನಾವು ಅಮೇರಿಕದಿಂದ ಈಜಿಪ್ಟಿಗಾಗಲೀ ಯೂರೋಪಿಗಾಗಲೀ ಎಲ್ಲೇ ಹೋದರೂ ನಾವು ಅಲ್ಲಿಯವರ ಕಣ್ಣಿಗೆ ಭಾರತೀಯರೇ ಎಂಬುದನ್ನು ನಾನು ನನ್ನ ಯುರೋಪಿನ ಪ್ರವಾಸದಲ್ಲಿ ಸ್ವತಃ ಅನುಭವಿಸಿದ್ದು ನಿಜ.) ಪ್ರವಾಸಿಗರು ಏನನ್ನು ’ನೋಡಲು’ ಹೋಗುತ್ತಾರೆ, ಎಷ್ಟು ’ದೂರ’ ಹೋಗುತ್ತಾರೆ ಎನ್ನುವುದು ಮುಖ್ಯ. ನೀವು ಕೇವಲ ನೋಡಲು ಹೋಗುವವರಾದರೆ ನಿಮ್ಮ ಪುಳಿಯೊಗರೆ, ತಿಳಿಸಾರು-ಅನ್ನ, ಮೊಸರು ನಿಮ್ಮ ಜೊತೆ ಬಂದೀತು, ಅಲ್ಲಿಯ ಬದುಕನ್ನು ಅನುಭವಿಸಿ ನೋಡುವವರಿಗೆ ಗೋಟ್ ಚೀಜೂ ಇಷ್ಟವಾದೀತು ಎನ್ನುವುದು ಈ ಹೊತ್ತಿನ ತತ್ವವಷ್ಟೇ!
© copyright http://antaranga.blogspot.com
ಸಂಪದದಲ್ಲಿ ಕೆಲವರಿದ್ದಾರೆ...
ಇದಾರೆ. ಯಾಕಿದಾರೋ ಗೊತ್ತಿಲ್ಲ, ಸುಮ್ನೆ ಇದಾರೆ. ತಾವಂತೂ ಏನೂ ಬರೆಯೊದಿಲ್ಲ. ಬೇರೆಯವರು ಬರೆದಿದ್ದನ್ನು ಯಾರಿಗೂ ಗೊತ್ತಾಗ್ದೆ ಇರೋ ಹಾಗೆ ಓದ್ತಾರೆ. ಎಲ್ಲೋ ಅಮ್ಮವಾಸ್ಯೆಗೊ ಹುಣ್ಣಿಮೆಗೋ ಒಂದು ಕಮೆಂಟ್ ಹಾಕಿ ಓಡಿ ಹೋಗ್ತಾರೆ. ಆ ಕಮೆಂಟ್‍ಗೆ ಬೇರೆ ಯಾರಾದ್ರು ಏನಾದ್ರು ಬರೆದ್ರೆ ಅದನ್ನ ನೋಡೋ ಗೋಜಿಗೂ ಹೋಗೋದಿಲ್ಲ.
ಹೇಳಿದ್ನಲ್ಲ, ಸುಮ್ನೆ ಇದಾರೆ, ಅಷ್ಟೆ. ಮುಂದೆ ಓದಿ »
ಮುರಿ, ಮುಱಿ
ಮುರಿ(ನಾಮಪದ)=ಒಂದು ಬಗೆಯ ಆಭರಣ.
ಮಱಿ (ಕ್ರಿಯಾಪದ)=ತುಂಡಾಗು.
ಉದಾ: ರಾಮನು ಪಾಶುಪತಾಸ್ತ್ರವನ್ನು ಮುಱಿದನು.
ಕೃದಂತಭಾವನಾಮ: ಮುಱಿತ
ಭೂತಕೃದ್ವಾಚಿ: ಮುಱಿದು
ಭವಿಷ್ಯತ್ ಕೃದ್ವಾಚಿ: ಮುಱಿವ/ಮುಱಿಯುವ
ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
ಇದೊಂದು ಹಳೆಯ ಫೋಟೊ. ಪಿಯುಸಿಯಲ್ಲಿ ತೆಗೆಸಿಕೊಂಡಿದ್ದು. ಮುಂದೆ ಓದಿ »
ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?...
ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?... ಅಳೆಯಲಾಗದು... ಅಲ್ವಾ?
ಬೆಂಗಳೂರಿನ ಗಲ್ಲಿಗಳಲ್ಲಿ ಕೆಲವನ್ನು ಹೊರತುಪಡಿಸಿ ಕನ್ನಡ ಬಳಸದ ನಾಮಫಲಕ, ಗಲ್ಲಿ, ಬಡಾವಣೆ, ಕನ್ನಡ ಬಳಸದ ಸರ್ಕಾರಿ ಕಛೇರಿಗಳು, ಕನ್ನಡ ಬಳಸದ ಸರ್ಕಾರಿ ಅಧಿಕಾರಿಗಳು ನಿಮ್ಮ ಗಮನಕ್ಕೆ ಬಂದಲ್ಲಿ ನಮಗೆ ತಿಳಿಸಿ
ಇ-ಮೇಲ್ ವಿಳಾಸ : nammakarunaadu@gmail.com
ಹತ್ತು ವರ್ಷದ ಬಳಿಕ ಅವಳಿಗೆ
ಒಂದು ಸುಳ್ಳು
ರಾತ್ರಿ ೧೦ ಗಂಟೆ ಆಗಿತ್ತು, ಆಫೀಸಿನಿಂದ ಬಂದು ಅನ್ನ ಮಾಡಲು ರೆಡಿ ಮಾಡಿದೆ , ಹಾಗೇ ಮನೆಗೆ ಫೋನ್ ಮಾಡಿದೆ.
ಊಟ ಆಯ್ತೇನೋ ಅಂತ ಅಮ್ಮ ಕೇಳಿದ್ಳು. ನಮ್ಮ ಹೊತ್ತಲ್ಲದ ಹೊತ್ತಿನ ರಗಳೆ ಅಮ್ಮಂಗೆ ಹೇಳಿ ಯಾಕೆ ಬೇಜಾರು ಮಾಡೋದು ಅಂತ ಊಟ ಆಯ್ತು ಅಂದೆ...
ಗೆಳೆಯ
ಕೆಡುಕುಗಳ ಕಳೆದು ಒಳಿತ ಕೂಡಿಸುವ
ಗುಟ್ಟುಗಳ ಮುಚ್ಚಿಟ್ಟು ಗುಣಬಯಲಿಗೆಳೆವ
ಆಪತ್ತಿನಲಿ ಕೈ ಹಿಡಿದು ಬೇಕಾದ್ದ ಕೊಡುವ
ಇಂಥವನು ಇದ್ದರವ ನಿಜವಾದ ಗೆಳೆಯ
ಸಂಸ್ಕೃತ ಮೂಲ:
ಮುಂದೆ ಓದಿ »
ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ....

ಜಿರಲೆ ಬಗ್ಗೆ ಮತ್ತೆ ಬರೆಯುವಂತಾಗಿದೆ. ಅದೇನೋ ಜಿರಲೆಯಷ್ಟು ವಿಶೇಷ ಜೀವಿ ಬೇರೊಂದಿಲ್ಲ ಎನ್ನಿಸುತ್ತೆ ನನಗೆ. ನಮಗಿರುವುದು ಎರಡೇ ಕಣ್ಣುಗಳು, ನೋಟವೊಂದೇ. ಒಂದೊಂದು ಕಣ್ಣಿಗೊಂದೊಂದೇ ಲೆನ್ಸು (ಮಸೂರ). ಆದರೆ ಈ ಯಕ್ಕಶ್ಚಿತ್ ಹುಳುವಿಗೆ ಒಂದೊಂದು ಕಣ್ಣಲ್ಲೂ ಎರಡು ಸಾವಿರಕ್ಕೂ ಹೆಚ್ಚು ಮಸೂರಗಳಿರುತ್ತವೆ. ಅದ್ಯಾಕೋ ನಾ ಕಾಣೆ. ಅದೂ ಸರಿ, ಕೇವಲ ಎರಡೇ ಲೆನ್ಸಿನಲ್ಲಿ ಹೇಗೆ ಕಾಣುವುದು!! ಜಿರಲೆಗಳ ಲೆನ್ಸುಗಳ ಸಮಸ್ಯೆಯೆಂದರೆ ಕೆಂಪು ದೀಪದಡಿ ಇರುವಾಗ ಜಿರಲೆಗಳು ಕುರುಡು! ಹಸಿರು ದೀಪದಡಿ ಜಿರಲೆಗಳು ಮಹಾನ್ ದೂರದೃಷ್ಟಿವಂತರು!

ಜಿರಲೆ ಕಥೆ ಇದಾದರೆ, ಜೇಡದ್ದು ಒಂದು ಕೈ ಮೇಲೆ. ಮುವ್ವತ್ತು ಸಾವಿರ ಲೆನ್ಸುಗಳು!! ಆದರೆ ನಮ್ಮ ಹಾಗೆ ಎರಡೇ ಕಣ್ಣಲ್ಲ. ಬಹುತೇಕ ಜೇಡಗಳಿಗೆ ಎಂಟು ಕಣ್ಣುಗಳಿರುತ್ತವೆ! ತಲೆಯ ಮೇಲೆ, ಮುಖದ ಮುಂದೆ ಹೀಗೆ ಎಲ್ಲೆಲ್ಲೋ ಕಣ್ಣುಗಳಿದ್ದರೂ ಬಹಳ ಮಂದ ದೃಷ್ಟಿ. ಎದುರಿರುವ 'ವಸ್ತು'ವಿನ ಪ್ರಖರತೆಯು (light ಅಥವಾ dark) ಮಾತ್ರ ಗೊತ್ತಾಗುತ್ತೆ ಜೇಡಗಳಿಗೆ. ಅದಕ್ಕೇ ಬಲೆಯೊಳಗೆ ಏನು ಬಿದ್ದರೂ ಅದರ ಬಳಿ ಮೊದಲು ಓಡಿ ಬರುತ್ತೆ, ನಂತರ ಪ್ರಖರತೆ ಹೆಚ್ಚಾದರೆ ದೂರ ಹೋಗಿ ಬಲೆಯೆಲ್ಲಾ ಅಲ್ಲಾಡುವಂತೆ ಕುಣಿಯುತ್ತೆ, ಹಾಗಾದರೂ ಆ ವಸ್ತು ಕೆಳಗೆ ಬಿದ್ದು ಹೋಗಲಿ ಅಂತ. ಪ್ರಖರತೆ ಹೆಚ್ಚಾಗದಿದ್ದರೆ ಬಲೆಯಿಂದ ಹೆಣೆದು ಗುಳುಂ ಸ್ವಾಹ ಮಾಡಿಬಿಡುತ್ತೆ.

ನಾವು "ಆ ಮನುಷ್ಯನಿಗೆ ಹದ್ದಿನ ಕಣ್ಣು" ಎಂಬಂತಹ ವಾಕ್ಯಗಳನ್ನು ಉಪಯೋಗಿಸುವುದುಂಟು. ಅವನಿಗೇನೋ ಹದ್ದಿನ ಕಣ್ಣು, ಆದರೆ ಹದ್ದಿಗೆ ಎಂಥಾ ಕಣ್ಣು? ಮನುಷ್ಯನ ಕಣ್ಣುಗಳು ಒಂದು ವಸ್ತುವನ್ನು ಗುರುತಿಸಲು ಆ ವಸ್ತುವು ಎಷ್ಟು ದೂರದಲ್ಲಿರಬೇಕೋ ಅದಕ್ಕಿಂತ ಎರಡರಷ್ಟು ದೂರದಲ್ಲಿರುವ ಅದೇ ಗಾತ್ರದ ವಸ್ತುವನ್ನು ಗುರುತಿಸಬಲ್ಲ ಶಕ್ತಿ ಹದ್ದುಗಳಿಗಿವೆ. ಅರ್ಥಾತ್, ಮನುಷ್ಯನ ಲೆನ್ಸುಗಳಿಗಿರುವ ಶಕ್ತಿಗಿಂತ ದುಪ್ಪಟ್ಟು ಶಕ್ತಿ ಹದ್ದುಗಳ ಲೆನ್ಸುಗಳಿಗಿವೆ. ಇದನ್ನು Spacial Frequency ಅಂತ ಕರೆಯುತ್ತಾರೆ. ಫಾಲ್ಕನ್ - Falco sparverius ಎಂಬ ಒಂದು ಬಗೆಯ ಹದ್ದು ನಮಗಿಂತ 2.6ರಷ್ಟು ಹೆಚ್ಚಿನ SF ಹೊಂದಿದೆ. ಸಾರಾಂಶವೆಂದರೆ ಹದ್ದುಗಳು ನಾವು ಏನನ್ನು ನೋಡುತ್ತೇವೆಯೋ ಅದನ್ನು zoom ಮಾಡಿಕೊಂಡು clear format ಅಲ್ಲಿ ನೋಡುತ್ತವೆ.
ನಾವು ಹದ್ದಿನ ಕಣ್ಣು ಎಂದು ಹೇಳುವಂತೆ ಇಂಗ್ಲಿಷಿನವರು ಗುರಿ ಚೆನ್ನಾಗಿದ್ದವರಿಗೆ "ಬುಲ್ಸ್ ಐ" ಎನ್ನುತ್ತಾರೆ. ಗೂಳಿ ಕಣ್ಣು ಎಂದು ತರ್ಜುಮೆ ಮಾಡಿದರೆ ಅಷ್ಟು ಚೆನ್ನಾಗಿರುವುದಿಲ್ಲವಾದರೂ ಅರ್ಥ ಒಂದೇ. ಗೂಳಿಯನ್ನು ಕೆಣಕಿದರೆ ಅಟ್ಟಿಕೊಂಡು ಬರುವಾಗ ಅದರ ನೋಟ ಎದುರು ಇರುವ ವೈರಿಯ ಪ್ರಖರವಾದ ಒಂದು ಭಾಗದ ಮೇಲಿರುತ್ತೆ. ಎದುರಿರುವ ವೈರಿಯ ಬಟ್ಟೆಯ ಮೇಲೋ, ಕೈಯ ಮೇಲೋ, ಕಾಲಿನ ಮೇಲೋ, ಅಥವಾ.. ಎಲ್ಲೋ. ಅದರ ಗುರಿ, ಆ 'ಭಾಗ'ವನ್ನು ಗುದ್ದುವ ತನಕ ಬದಲಾಗುವುದಿಲ್ಲ. ನೇರ ನೋಟ. ಅದನ್ನೇ ನೋಡುತ್ತಲೇ, ಧಾವಿಸುತ್ತೆ. ಚಂಚಲಗೊಳ್ಳುವುದಿಲ್ಲ.
ಸಂಜೆಯ ಮಸುಕು ಮಸುಕು ಕತ್ತಲಲ್ಲದ ಬೆಳಕಿನಲ್ಲಿ, ಬೆಳಕಲ್ಲದ ಕತ್ತಲಿನಲ್ಲಿ ಮೊಬೈಲ್ ಫೋನು ಕಳೆದು ಹೋದಾಗ ಅದನ್ನು ಹುಡುಕಬೇಕೆಂದರೆ ಮನೆಯಲ್ಲಿ ಒಂದು ಬೆಕ್ಕು ಸಾಕಿಕೊಳ್ಳಬೇಕು. ನಮಗೆ ಎಷ್ಟು ಬೆಳಕು ಬೇಕೋ, ಅದರ ಎರಡರಷ್ಟು ಕಡಿಮೆ ಬೆಳಕಿನಲ್ಲಿ ಸ್ಪಷ್ಟವಾಗಿ ನೋಡಬಲ್ಲುದು ಬೆಕ್ಕು. ಬೆಕ್ಕಿನ ಕಣ್ಣು ಚೆಲುವಿಗೂ ಹೆಸರುವಾಸಿ. ಇದಕ್ಕೆ ಕಾರಣ ಹಲವು. ಬೆಕ್ಕುಗಳು ಪ್ರೀತಿ ವಾತ್ಸಲ್ಯವನ್ನು ವ್ಯಕ್ತ ಪಡಿಸುವುದು ಕಣ್ಣುಗಳಿಂದ, ನಾಯಿಗಳು ಬಾಲದಲ್ಲಿ ವ್ಯಕ್ತ ಪಡಿಸುವಂತೆ. ದುರುಗುಟ್ಟಿ ನೋಡಿ, ಕಣ್ಣು ಮಿಟುಕಿಸಿದರೆ ಆ ಬೆಕ್ಕು ತನ್ನ ಪ್ರೀತಿಯನ್ನು ತೋರಿಕೊಳ್ಳುತ್ತಿದೆಯೆಂದರ್ಥ. ಪ್ರತಿಯೊಂದು ಪ್ರಾಣಿಗೂ body language ಇರುತ್ತೆ. ಕೋಪಗೊಂಡಾಗ ಹೇಗಿರುತ್ತೆ, ಶಾಂತವಾದಾಗ ಹೇಗಿರುತ್ತೆ ಇತ್ಯಾದಿ - ಇರುವೆಗೂ ಕೂಡ! ಪ್ರಾಣಿಗಳ ಜೊತೆ ಇರುವವರು ಇದನ್ನು ಗಮನಿಸುತ್ತಲೇ ಇರುತ್ತಾರೆ. ಬೆಕ್ಕುಗಳಿಗೆ ದೂರದ ವಸ್ತುಗಳು ಚೆನ್ನಾಗಿ ಅದ್ಭುತವಾಗಿ ಕಂಡರೂ, ಕತ್ತಲಲ್ಲಿ ಏನೇನೇಲ್ಲಾ ಸಾಧಿಸಿದರೂ ಹತ್ತಿರದ ವಸ್ತುಗಳು ಮಂಜು ಮಂಜಾಗಿಬಿಡುತ್ತವೆ. ಮತ್ತೊಂದು ಅಚ್ಚರಿಯೆಂದರೆ ತನ್ನ ಮೂಗಿನ ನೇರಕ್ಕೆ ಬೆಕ್ಕು ಎಂದೂ ನೋಡಲಾಗದು!

ನಮ್ಮ ಹಿರಿಯ ಕವಿಗಳು ಕಣ್ಣನ್ನು ಕಮಲಕ್ಕೆ ಹೋಲಿಸಿರುವುದು ಯಾಕೆ ಅಂತ ನನಗೆ ಇನ್ನೂ ಅರ್ಥ ಆಗಿಲ್ಲ. ಆದರೆ ಕವಿಗಳ ಪ್ರಕೃತಿಪ್ರೇಮವನ್ನು ಮೆಚ್ಚಬೇಕು. ಅದೇ ರೀತಿ ಮನುಷ್ಯ ಹೆಂಗಸಿನ ಕಣ್ಣನ್ನು "ಮೀನಾಕ್ಷಿ" ಎಂದೂ ಬಳಸಿಕೊಂಡಿದ್ದಾರೆ. ಗಂಡಸಿಗೆ ಮೀನಾಕ್ಷಿ ಇರುವುದಿಲ್ಲವೇನೋ ಪಾಪ, ಬೆಸ್ತಾಕ್ಷಿ ಅನ್ನಬಹುದೇನೋ ಗಂಡಸಿನ ಕಣ್ಣನ್ನು. ಮೀನಿನ ಕಣ್ಣು ಯಾಕೆ ಅಷ್ಟು ಪ್ರಸಿದ್ಧಿ ಪಡೆಯಿತು? ಕಣ್ಣು ತುಂಬಾ ಚಂಚಲವಾಗಿದ್ದರೆ ಅದನ್ನು ಸೌಂದರ್ಯ ಅನ್ನುತ್ತಾರೆ ಕವಿಗಳು. ಆದರೆ ಮನಸ್‍ಶಾಸ್ತ್ರಜ್ಞರು ಚಂಚಲ ಕಣ್ಣುಗಳಿರುವವರು ಸುಳ್ಳು ಹೇಳುವುದು ಜಾಸ್ತಿ ಎನ್ನುತ್ತಾರೆ. ಸೌಂದರ್ಯ ಮತ್ತು ಸುಳ್ಳು ಜೊತೆಜೊತೆಗೆ ಇರುತ್ತೆ ಅನ್ನಿಸುತ್ತೆ. ಮೀನುಗಳು ದೇವತೆಗಳಂತೆ ಅನಿಮಿಷಗಳು, ಅಂದರೆ ರೆಪ್ಪೆಗಳಿಲ್ಲದ ಜೀವಿಗಳು. ಬಹುಶಃ ದೇವತೆಗಳಿಗೆ ರೆಪ್ಪೆಯಿಲ್ಲ ಎನ್ನುವ ಕಲ್ಪನೆ ಕವಿಗಳಿಗೆ ಬಂದಿದ್ದು ಮೀನುಗಳನ್ನು ನೋಡಿದ ಮೇಲೆಯೇ ಅನ್ನಿಸುತ್ತೆ. ಪಾಪ, ಕಣ್ಣು ಬಿಟ್ಟುಕೊಂಡೇ ನಿದ್ದೆ ಮಾಡಬೇಕು ಮೀನುಗಳು!

ಇದು ಪುಫರ್ ಫಿಷ್ ಎಂಬ ಮೀನಿನ ಕಣ್ಣು
ಮೀನಿನ ಕಣ್ಣುಗಳಂತೆಯೇ ಜಿಂಕೆಯ ಕಣ್ಣುಗಳೂ ಸಹ ಬಹಳ ಪ್ರಸಿದ್ಧ. ಜಿಂಕೆಗೆ ಅಂಥಾ ದೂರದೃಷ್ಟಿಯಾಗಲೀ, ಚುರುಕು ಕಣ್ಣುಗಳಾಗಲೀ ಇಲ್ಲ. ಹೊಳೆಯುವ ಚಂಚಲ ಕಣ್ಣುಗಳಿವೆ. ಬಹುಶಃ ಹೆಂಗಸನ್ನು ವ್ಯಂಗ್ಯ ಮಾಡಲು ಜಿಂಕೆಯ ಕಣ್ಣವಳೇ ಎಂದು ಹೇಳಿದರೆನಿಸುತ್ತೆ ಹಿಂದಿನ ಗಂಡು ಕವಿಗಳು.
ಜಿಂಕೆ ಮೀನುಗಳ ಕಣ್ಣುಗಳ ಚೆಲುವಿಗಿಂತ ಸೊಗಸಾಗಿರುವುದು ಗೋಸುಂಬೆ (Chameleon) ಕಣ್ಣು! ಎರಡು ಕಣ್ಣು - ಎರಡು ನೋಟ!! ಎಡಗಣ್ಣು ಎಡಗಡೆ, ಬಲಗಣ್ಣು ಬಲಗಡೆ ತಿರುಗಿಸಿ, ಎರಡು ಭಿನ್ನ ನೋಟಗಳನ್ನು ಗ್ರಹಿಸಬಹುದಾದ ಶಕ್ತಿ ಗೋಸುಂಬೆಗಿದೆ. ಆದರೆ ಬೇಟೆಯ ಸಮಯದಲ್ಲಿ ಮಾತ್ರ ಈ ಎರಡೂ ಕಣ್ಣುಗಳು ಒಂದೇ ದಿಕ್ಕಿನಲ್ಲಿ ನೋಡುತ್ತಿರುತ್ತೆ.

ಕಣ್ಣುಗಳಿದ್ದು ಇಷ್ಟೆಲ್ಲಾ ಆಟಗಳಾಡುವ ಈ ಎಲ್ಲ ಜೀವಿಗಳಿಗಿಂತ ಕಣ್ಣೇ ಇಲ್ಲದೆ ಸಾಧಿಸುವ ಒಂದು ಪ್ರಾಣಿಗೆ ತಲೆಬಾಗುತ್ತವೆ. ಮನುಷ್ಯ ಕೂಡ ಇದನ್ನು ಕಂಡರೆ ಮೈಲಿ ದೂರ ಓಡುತ್ತಾನೆ. ಇದು ಕಣ್ಣಿಂದ ನೋಡಲು ಸಾಧ್ಯವೇ ಇಲ್ಲ, ಕಣ್ಣುಗಳೆಂಬ ಆಕೃತಿಗಳೇ ಇಲ್ಲ ಇದಕ್ಕೆ. ಇದು ಕೇವಲ ಉಷ್ಣವನ್ನು ಗ್ರಹಿಸಿ ಆಕ್ರಮಣ ಮಾಡುವ ಪ್ರಾಣಿ. ಇದರ ಹೆಸರು ಜಿಗಣೆ!
ಆದರೂ ನಮ್ಮ ಕಣ್ಣುಗಳು ಪುಣ್ಯ ಮಾಡಿವೆ. ಈ ಎಲ್ಲಾ ಪ್ರಾಣಿಗಳನ್ನೂ ನಾವು ನೋಡುತ್ತೇವೆ. ಮೇಲೆ ಹೆಸರಿಸಿದ ಯಾವ ಪ್ರಾಣಿಯೂ ಬೇರೆ ಎಲ್ಲಾ ಪ್ರಾಣಿಗಳನ್ನೂ ನೋಡಿರಲಾರದು. ನಮಗಿರುವುದು ಎರಡೇ ಕಣ್ಣು, ಎರಡೇ ಲೆನ್ಸು, ಒಂದೇ ನೋಟ - ನಾವು ಮನುಜರೂ... ನಾವು ಮನುಜರೂ...
-ಅ
28.08.2008
12AM
ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
೧೧. "ದೇವಾಲಯಗಳ ಚಕ್ರವತ್ರಿ" ಎಂದು ಕರೆಸಿಕೊಳ್ಳುವ ದೇವಾಲಯ ಯಾವುದು?
೧೨. ಆಕಾಶವಾಣಿಯ ಮೂಲಕ ಮೊದಲು ಮಾತನಾಡಿದ ಕನ್ನಡಿಗ ಯಾರು?
೧೩. ಭಾರತೀಯ ಸಂವಿಧಾನ ಬರೆಯುವಾಗ ಇದ್ದ ಕನ್ನಡಿಗ ಯಾರು?
೧೪. ಕರ್ನಾಟಕದಲ್ಲಿರುವ ಏಕೈಕ "ದಂತ ಸಿಂಹಾಸನ" ಎಲ್ಲಿದೆ?
೧೫. ಕರ್ನಾಟಕದ" ಗಿರಿಧಾಮಗಳ ರಾಣಿ "ಯಾವುದು?
೧೬. "ನವಿಲು ತೀರ್ಥ ಅಣ್ಣೆಕಟ್ಟು" ಯಾವ ನದಿಗೆ ಕಟ್ಟಲಾಗಿದೆ? ಮುಂದೆ ಓದಿ »
ಸನ್ನಿವೇಲ್ ನಲ್ಲಿ ಸೈಕಲ್ ಹೊಡೆದಿದ್ದು
ಸನ್ನಿವೇಲ್ ನಲ್ಲಿ ಸೈಕಲ್ ಹೊಡೆದಿದ್ದು
(ಇದು ಸ೦ಪದದಲ್ಲಿ ನನ್ನ ಮೊದಲನೆ ಬರಹ. ತಪ್ಪಿದ್ದಲ್ಲಿ ಮನ್ನಿಸಿ) ಮುಂದೆ ಓದಿ »
ಡಿವಿಜಿ ರಸ್ತೆ ದೇವೇಗೌಡ್ರದ್ದಾ ?
ಡಿವಿಜಿ ರಸ್ತೆ ದೇವೇಗೌಡ್ರದ್ದಾ ? ಇದ್ದಕ್ಕಿದ್ದ ಹಾಗೆ ಈ ಪ್ರಶ್ನೆ ಈಗ ಯಾಕೆ ಬಂತು ಅಂತ ತಲೆ ಕೆಡಿಸಿಕೊಳ್ಳಬೇಡಿ. ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿ ಬಜಾರ್ ಬಳಿ ಇರುವ ಡಿವಿಜಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದೆ. ನನ್ನ ಮುಂದೆ ಇಬ್ಬರು ಹುಡುಗಿಯರು ನಡೆದುಕೊಂಡು ಹೋಗುತ್ತಿದ್ದರು. ವಯಸ್ಸು ಹೆಚ್ಚೆಂದರೆ ೨೦ರ ಆಸುಪಾಸು. ಇಲ್ಲಿ ಪ್ರಶ್ನೆ ವಯಸ್ಸಿನದ್ದಲ್ಲ. ಮುಂದೆ ಓದಿ »
ಬೆಂಗಳೂರಿನಲ್ಲಿ ನಡೆಯಲಿರುವ ಎರಡು ಡೆವೆಲಪರ್ ಈವೆಂಟುಗಳು
ಗೆಳೆಯರೇ, ಎರಡು ಸುದ್ಧಿಯನ್ನು ತಿಳಿಸಬೇಕಿತ್ತು. ಈ ವರ್ಷ ಅನೇಕ ಡೆವೆಲಪರ್ ಈವೆಂಟುಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮತ್ತೆರೆಡು ಡೆವೆಲಪರ್ ಈವೆಂಟುಗಳು ನಡೆಯಲಿವೆ. ನೀವು ಮತ್ತು ನಿಮ್ಮ ಗೆಳೆಯರಿಗೆ ಈ ಡೆವೆಲಪರ್ ಈವೆಂಟುಗಳ ಬಗ್ಗೆ ತಿಳಿಸಿ, ಮಾಹಿತಿ ಹರಡಿ. ಮುಂದೆ ಓದಿ »
ನಾ ಹಿಡಿಯದ ಹಾದಿ
ಅಲ್ಲೊಂದು ದಾರಿ
ಆ ದಾರಿಯ ಹಿಡಿದು ಸಾಗುವುದು ಎನಗೊಳಿತೆ?
ಅರಿವಿರಲಿಲ್ಲವೆನಗೆ.
ಕಲ್ಲಿರಬಹುದು ಮುಳ್ಳಿರಬಹುದು
ಕಷ್ಟ ಕೋಟಲೆಗಳೆದುರುಗೊಳ್ಳಬಹುದು
ಸುಮ್ಮನೇಕೆ ಇಲ್ಲದ ಉಸಾಬರಿ ಎನಗೆ?
ಮರುಯೋಚನೆಯಿಲ್ಲದೆ ನಡೆದೆ ನನ್ನ ದಾರಿಯಲ್ಲೇ ನಾ.
ಮನಸು ಕಮಲದೆಲೆಯ ಮೇಲಣ ನೀರ ಹನಿ
ಮತ್ತೆ ಆ ದಾರಿಯ ಕಂಡಾಗೆಲ್ಲ ತಿರು ತಿರುಗಿ ನೋಡುವ ಹುಚ್ಚು
ಹಿಡಿದು ಸಾಗಲೇ ಆ ಹಾದಿಯಲೊಮ್ಮೆ?
ಮನದಲ್ಲಿ ಮಿಂಚಂತೆ ಯೋಚನೆ.
ಮತ್ತದೇ ನೂರಾರು ಪ್ರಶ್ನೆಗಳು ಮನದಲ್ಲಿ ಸುಳಿದು
ನನ್ನದೇ ಯೋಚನೆಗೆ ನನ್ನ ಸಮ್ಮತವಿಲ್ಲದೆ
ಸುಮ್ಮನೇ ನಡೆದೆ ನನ್ನ ದಾರಿಯಲ್ಲೇ ನಾ.
ಮನಸು ಕಮಲದೆಲೆಯ ಮೇಲಣ ನೀರ ಹನಿ
ಮತ್ತೆ ಹೊರಳಿತು ಆ ಹಿಡಿಯದ ಹಾದಿಯ ಕಡೆಗೆ.
ತಿರು ತಿರುಗಿ ನೋಡಿದಾಗ
ಕಲಾವಿದನ ಕುಂಚದಲ್ಲರಳಿದ ಕಲೆಯ ಚೆಲುವು
ಕಲ್ಪನೆಯಲಿ ಹುಟ್ಟಿ
ಹೂವು ಹಾಸಿದ ನೆಲವಾಗಿರಬಹುದು
ಹಿಡಿದು ಸಾಗಲೇ ಆ ಹಾದಿಯಲೊಮ್ಮೆ?
ಮನದಲ್ಲಿ ಮಿಂಚಂತೆ ಯೋಚನೆ.
ಮತ್ತದೇ ನನ್ನ ದಾರಿಯ ನೆನಪಾಗೆ
ಸುಮ್ಮನೇ ನಡೆದೆ ನನ್ನ ದಾರಿಯಲ್ಲೇ ನಾ.
ಮನಸು ಕಮಲದೆಲೆಯ ಮೇಲಣ ನೀರ ಹನಿ
ಇಂದು ನಡೆದುಬಿಡಬೇಕು ಆ ಹಿಡಿಯದ ಹಾದಿಯಲಿ
ಅನ್ನಿಸಿದೊಡನೆಯೇ ಹೊರಟು ನಿಂತೆ.
ಹಾದಿಗೆದುರಾಗಿ ನಿಂತು ನೋಡಲು
ಅಂದು ಬೇಲಿ ಹಾಕಿದೆ ಆ ಹಾದಿಗೆ.
ಮತ್ತೆ ಮರಳುವ ಮನಸಿಲ್ಲವಾದರೂ
ನಡೆಯಲೇಬೇಕಿತ್ತು ಮರಳಿ ನನ್ನದೇ ಹಳೆಯ ದಾರಿಯಲಿ ನಾ.
ಬಿಟ್ಟರೂ ಬಿಡದೆನ್ನುವ ಮೋಹ
ಆ ಹಿಡಿಯದ ಹಾದಿಯೆಡೆಗೆ
"ಬೇಲಿ ಹಾರಿದರೆ ಸಾಗಬಹುದಲ್ಲ" ಕೂಗಿ ಹೇಳಿತು ಮನವು.
ನನ್ನನಾವರಿಸಿದ ನೂರು ಪ್ರಶ್ನೆಗಳು ಕರಗಿ
ಮನವು ಹಗುರಾಗಿ
ಹೊರಟು ನಿಂತೆನು ಮತ್ತೆ
ಹಿಡಿಯದ ಆ ಹಾದಿಯಲಿ ಸಾಗಲನುವಾಗಿ.
ಆ ಹಾದಿಯೆದುರಲಿ ಬಂದು ನಿಂತು ಹೆಜ್ಜೆ ಮುಂದಿಡುತಿರಲು
ಸುತ್ತ ನೋಡಿದರೆ ಸುತ್ತುವರಿದಾ ಜನರು
ಅತ್ತ ಹೋಗಲು ಬಿಡದೆ ಎಳೆಯುತಿದ್ದರು ನನ್ನ
ಎಡಕೊಮ್ಮೆ ಬಲಕೊಮ್ಮೆ .
ನನ್ನ ಕೂಗು ಮೂಕವಾಯಿತು
ಹೆಜ್ಜೆ ಕುರುಡಾಯಿತು
ಯಾರದೋ ಹೆಜ್ಜೆ ಸಾಗಿದೆಡೆ ನನ್ನದೂ ಹೆಜ್ಜೆ ಸಾಗಿ
ಪಯಣ ಆರಂಭವಾಯಿತು ಮತ್ತದೇ ಹಳೆಯ ದಾರಿಯಲಿ.
ಎಂದೂ ಹಿಡಿಯದ ಆ ಹಾದಿಗೆ ಬೆನ್ನು ತಿರುಗಿಸಿ ನಾ ಹೊರಟೆ
ಆ ಹಾದಿ ನಾ ಹಿಡಿಯದ ಹಾದಿಯಾಗಿಯೇ ಉಳಿದುಹೊಯ್ತು.

