ಸಮುದಾಯ ತಾಣಗಳು
ಹುಡುಗರ ಆಟ
ಇವಳ ಮುಖ ಬಲು ದುಂಡು
ಇವಳ ಹಿಂದೆ ಸದಾ ಹುಡುಗರ ದಂಡು
ಮಾಯವಗುವಳು ಹುಡುಗರನು ಕಂಡು
ಆದರು ಬಿಡಲಿಲ್ಲ ಹುಡುಗರ ಹಿಂಡು
-Vರ ( Venkatesha ರಂಗಯ್ಯ )
ಬರಹ ಹೇಳಿಕೊಡಿ, ನುಡಿ ಬೇಡ.. !
ಕನ್ನಡದ ಮಕ್ಕಳಿಗೆ, ಅಂದರೆ ಅಚ್ಚಕಟ್ಟಾಗಿ ಕನ್ನಡ ಮಾಡುವ ಮಕ್ಕಳಿಗೆ ಶಾಲೆಯಲ್ಲಿ ಕನ್ನಡ ಎಂಬ ಒಂದು ವಿಶಯವೇ ಬೇಡ.
ಮಕ್ಕಳಿಗೆ ಬರೀ ಕನ್ನಡಲಿಪಿಯನ್ನು ಕಲಿಸಿದರೆ ಸಾಕು... ಅಂದರೆ ಮಕ್ಕಳು ತಾವು ಏನು ಮಾತಾಡುತ್ತಾರೋ ಅದನ್ನು ಬರೆಯಲು ಬಂದರೆ ಸಾಕು... ಮುಂದೆ ಓದಿ »
ಹಸಿ ಹಸಿ ಪ್ರೀತಿ
ಮನಸಿಂದು ಹಸಿಯಾಗಿದೆ
ಪ್ರೀತಿ ಮೊಳೆತಾಗಿದೆ
ಮನಸು ಬೆರೆತಾಗಿದೆ
ಮಾತು ಈಗ ಶುರುವಾಗಿದೆ
ಮೌನ ಓಡಿ ಹೋಗಿದೆ
ಹೃದಯದಲ್ಲಿ ಪ್ರೀತಿ ಇಮ್ಮಡಿಯಾಗಿದೆ.
-Vರ ( Venkatesha ರಂಗಯ್ಯ )
ಓದಿದ್ದು ಕೇಳಿದ್ದು ನೋಡಿದ್ದು-1
ಚೀನಾಗೆ ನೂರು, ಭಾರತಕ್ಕೇಕೆ ಮೂರು?
ಒಲಿಂಪಿಕ್ಸಿನಲ್ಲಿ ಭಾರತದ ಸಾಧನೆ ಬಗ್ಗೆ ವಿಜಯ ಕರ್ನಾಟಕದಲ್ಲಿ ಬರಹವಿದೆ.
"ಒಲಿಂಪಿಕ್ಸ್ ಪದಕ ಗೆಲ್ಲುವುದೆಂದರೆ ಅದು ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಸ್ಥಾನಗಿಟ್ಟಿಸಿದಂತಲ್ಲ! "
-------------------------------------------------------------------------------------------
ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ
ನೆಲ್ಲಿಕೆರೆ ವಿಜಯಕುಮಾರ್ ಮುಂದೆ ಓದಿ »
ಸಂಪದದಲ್ಲಿ ಕೆಲವರಿದ್ದಾರೆ...
ಇದಾರೆ. ಯಾಕಿದಾರೋ ಗೊತ್ತಿಲ್ಲ, ಸುಮ್ನೆ ಇದಾರೆ. ತಾವಂತೂ ಏನೂ ಬರೆಯೊದಿಲ್ಲ. ಬೇರೆಯವರು ಬರೆದಿದ್ದನ್ನು ಯಾರಿಗೂ ಗೊತ್ತಾಗ್ದೆ ಇರೋ ಹಾಗೆ ಓದ್ತಾರೆ. ಎಲ್ಲೋ ಅಮ್ಮವಾಸ್ಯೆಗೊ ಹುಣ್ಣಿಮೆಗೋ ಒಂದು ಕಮೆಂಟ್ ಹಾಕಿ ಓಡಿ ಹೋಗ್ತಾರೆ. ಆ ಕಮೆಂಟ್‍ಗೆ ಬೇರೆ ಯಾರಾದ್ರು ಏನಾದ್ರು ಬರೆದ್ರೆ ಅದನ್ನ ನೋಡೋ ಗೋಜಿಗೂ ಹೋಗೋದಿಲ್ಲ.
ಹೇಳಿದ್ನಲ್ಲ, ಸುಮ್ನೆ ಇದಾರೆ, ಅಷ್ಟೆ. ಮುಂದೆ ಓದಿ »
TARGET SECURITY SERVICES
ಎಲ್ಲಾ ಕನ್ನಡಾಭಿಮಾನಿಗಳಿಗೆ ಮತ್ತು ವಿಸ್ಮಯ ನಗರಿಗೆ ನಮಸ್ಕಾರಗಳು.
ಇದು ಜಾಹಿರಾತು.
ಸಾಮಾನ್ಯವಾಗಿ group4, Mac,Egal Eye, Garuda ಇಂತಹ ಸೆಕ್ಯೂರಿಟಿ ಸಂಸ್ಥೆಗಳು, ಹೊರರಾಜ್ಯದವರಿಂದ ನಡೆಸಲ್ಪಡುತ್ತಿವೆ. ಕರ್ನಾಟಕದವರಿಂದ ನಡೆಸಲ್ಪಡುವ ಇದೇ ತರಹದ ಸಂಸ್ಥೆಗಳಿದ್ದರೂ ಅವುಗಳ ಪ್ರಮಾಣ ಗೌಣ. ಈ ಹಿನ್ನಲೆಯಲ್ಲಿ ಇದು ಕನ್ನಡಿಗನೊಬ್ಬನು ಶುರು ಮಾಡಿರುವ ಸಣ್ಣ ಉದ್ದಿಮೆ. ಇದನ್ನು ನೀವುಗಳು ಪ್ರೊತ್ಸಾಹಿಸುವಿರೆಂದು ನಂಬುತ್ತೇನೆ.
TARGET SECURITY SERVICES ಇದು ಭದ್ರತಾ ಸಿಬ್ಬಂದಿಯ ನಿಯೋಜನೆಗಾಗಿ ಸ್ಥಾಪಿಸಲ್ಪಟ್ಟಿರುವ ಸಂಸ್ಥೆ.
ಜಯ ಹೇ!
ಮೊನ್ನೆ ಆಗಸ್ಟ್ ಹದಿನೈದರಂದು ಟೀವಿ ನೋಡ್ತಾ ಇದ್ದೆ. ಉದಯದಲ್ಲೋ, ಸುವರ್ಣದಲ್ಲೋ ಮರೆತು ಹೋಯ್ತು - 'ಅಡುಗೆ ಕಾರ್ಯಕ್ರಮ' ಪ್ರಸಾರ ಆಗ್ತಾ ಇತ್ತು. ಅಡುಗೆ ಮಾಡ್ತಾ ಇದ್ದವರು 'ತ್ರಿವರ್ಣ ದೋಸೆ' ಅಂತಾ 'ಖಾರಾಪುಡಿ, ಹಸಿರು ಚಟ್ನಿಪುಡಿ ಸೇರಿದ ಮೂರು ಪಟ್ಟೆ ಇರುವ ದೋಸೆ ಮಾಡಿ, 'ಸ್ವಾತಂತ್ರ್ಯ ದಿವಸದ ಸ್ಪೆಷಲ್ಲು' ಅಂತಾ ಮಧ್ಯಕ್ಕೆ ನೀಲಿ ಬಣ್ಣ ಹಾಕಿದ ಮೂಲಂಗಿಯ ಗಾಲಿಯನ್ನೋ ಅಥವಾ ಮತ್ತೇನನ್ನೋ ಇಟ್ಟು ತ್ರಿವರ್ಣ ಧ್ವಜವನ್ನು 'ಈಗ ಕಂಪ್ಲೀಟ್ ಆಯ್ತು' ಎಂದುಲಿದು ತೋರಿಸಿದರು. ನನಗೆ ತಲೆಕೆಟ್ಟು ಹೋಯ್ತು, 'ಈ ತ್ರಿವರ್ಣ ಧ್ವಜದ ದೋಸೆಯನ್ನು ಹರಿಯದೇ ತಿನ್ನುವುದು ಹೇಗೆ'?
ಮಾತನಾಡುವ ಗಿಡದ ಮನಸು...
ಮಾತನಾಡುವ ಗಿಡದ ಮನಸ್ಸು.....
ಒಂದೂರು ಮನುಷ್ಯರಿರುವ, ಮನಸುಗಳಿರುವ ಜನ.. ಅಲ್ಲೊಂದು ಗಿಡ ಹೆಸರಿಲ್ಲದಿರುವ ಗಿಡ... ಹೆಸರಿಲ್ಲದಿರುವುದಕ್ಕೆ ಕಾರಣ ಅದರಿಂದ ಮನುಷ್ಯರಿಗೆ ಪ್ರಯೋಜನವಿಲ್ಲ ಎಂದು ತಿಳಿದಿರುವ ಮನುಷ್ಯರ ವಿಕೃತ ಮನಸ್ಸು. ಭಗವಂತನ ಕೃಪೆಯಿಂದಲೋ ಅಥವಾ ತನ್ನೊಡಲ ಭಾವನೆಯನ್ನು ಹಂಚಿಕೊಳ್ಳಲೆಂದೋ ಅಂತಹ ಜಾತಿಯ ಒಂದು ಗಿಡಕ್ಕೆ ಮಾತನಾಡುವ ಗುಣ.. ಆ ಗಿಡ ಬೆಳೆಯೋದಿಲ್ಲ ಎಂಬ ನಂಬಿಕೆ ಜನಗಳದು. ಆ ಕಾರಣದಿಂದಲೋ ಏನೊ ಅದಕ್ಕೆ ನೀರಿಲ್ಲ. ತನ್ನ ಬಗ್ಗೆ ಜನಗಳು ಭಾವಿಸಿರುವ, ಪ್ರಯೋಜನವಿಲ್ಲ, ಬೆಳೆಯುವುದಿಲ್ಲ ಎನ್ನುವುದು ಮನಸ್ಸಿನಲ್ಲಿ ಹುಟ್ಟಿರುವಾಗ ಪಾಪ ಆ ಗಿಡವಾದರೂ ಏನು ಮಾಡೀತು?
ಬೀChi ಉವಾಚ
ಬೀChi ಅವರ 'ಬೆಳ್ಳಿ ತಿಮ್ಮ 108 ಹೇಳಿದ' ದಿಂದ...
-ಆಳವು ಕಡಿಮೆಯಾದಂತೆಲ್ಲಾ ಉದ್ದದಲ್ಲಿ ಜಾಸ್ತಿಯಾಗುವಂತಹ ರಬ್ಬರ್ ನಂತಹುದಕ್ಕೆ ಭಾಶಣ ಎಂದು ಹೆಸರು.
-ಕಂಡುದರಲ್ಲಿ ಮರೆಯಬೇಕಾದ್ದೆಶ್ಟು, ಅರಿಯಬೇಕಾದ್ದೆಶ್ಟು, ಎಂಬುದನ್ನು ಅರಿತವನೇ ಕಡುಜಾಣ.
'ಆನೇಕರು ನನ್ನ ಗ್ರಂಥವನ್ನು ಓದಿ ಹೊಗಳುತ್ತಾರೆ. ಒಬ್ಬ ಸಾಹಿತಿ ಓದದೆಯೇ ಬಯ್ಯುತ್ತಾನೆ. ಊಟಕ್ಕೆ ಬಂದ ಅತಿಥಿಗಳು ಹೆಚ್ಚೋ ಅಥವಾ ನನ್ನಂತಹ ಇನ್ನೊಬ್ಬ ಅಡಿಗೆಯವನೋ ?' ಎಂದು ಕೇಳುತ್ತಾನೆ ಅವಿವೇಕಿ ತಿಮ್ಮ.
-'ವಿಡಂಬ'ನ ಸಾಹಿತ್ಯ! ಯಾರು ಸ್ವಾಮಿ ವಿಡಂಬ? ಅವನ ಹೆಸರನ್ನೇ ಕೇಳಿಲ್ಲವಲ್ಲ ನಾವು! ಯಾವ ಶತಮಾನದ ಕವಿ 'ವಿಡಂಬ' ಎಂಬುವವನು?
-ಕಟ್ಟಕಡೆಗೆ ನಗುವವನಿಗೆ ಉಬ್ಬುಹಲ್ಲೇ ಇರಬೇಕು.
ವಿರಹ (combined ಕವನ)
ನಿನ್ನ ನೆರಳೇ ಸೋಕಿದೆ
ಮಳೆಯಿಂದು ಕಾಡಿದೆ
ನಿನ್ನ ನೆನಪೇ ಸುರಿದಿದೆ
ನನ್ನ ಉಸಿರ ಸುಡುತಿದೆ
ಬಾಡದ ಹೂವದು ಸ್ನೇಹ..........
ಮತ್ತೆ ಬಂದಿದೆ ಗೆಳೆಯರ ದಿನ ಸ್ನೇಹದ ಅಂಗಳದಲ್ಲಿ ಕಿರು ನಗೆಯ ಬೀರುತ್ತಾ, ಹಳೆಯ ನೆನಪುಗಳ ಕದಡುತ್ತ, ಎಂದೋ ಯಾವುದೋ ಕಾರಣಕ್ಕೆ ಮುನಿಸಿಕೊಂಡ ಸ್ನೇಹಿತರ ಒಂದು ಗೂಡಿಸುತ್ತಾ, ಕಳೆದು ಹೋದವರ ಮತ್ತೆ ತನ್ನ ಸ್ನೇಹದಲ್ಲಿ ಬಂದಿಸುತ್ತಾ, ಬಂದಿತೆ ಮತ್ತೆ ಮೆಲು ನಗೆಯ ಬೀರುತ್ತಾ, ಗೆಳೆಯರ ದಿನ ಆತ್ಮೀಯ ಗೆಳೆಯ ಗೆಳತಿಯರಿಗಾಗಿ,
ಸ್ನೇಹ ಅದು ಎರಡು ಮನಗಳ ನಡುವೆ ದೇದಿಪ್ಯ ಮಾನವಾಗಿ ಉರಿಯುವ ಹಣತೆ, ಬದುಕಿನ ದಾರಿಗೆ ಬೆಳಕದುವೆ, ಸ್ನೇಹದ ಹಣತೆ, ಸ್ನೇಹ ಅದು ಸೊಗಸು, ಈ ಬದುಕಿನ ಬವಣೆಗಳ ನಡುವೆ ನೆನಪಿಸಲು ಬಂದಿದೆ, ಗೆಳೆಯ / ಗೆಳತಿಯರ ಹೆಸರು, ಮರೆಯದಿರಿ ಸ್ನೇಹದ ಅಂಗಳದಲ್ಲಿ ಬಂದು ಚಿನ್ನಾಟವಾಡಿದವರ,
ಕನ್ನಡ ಯೆಲ್ಲೋ ಪೇಜ್ / ಡೈರೆಕ್ಟರಿ - ವಿಸ್ಮಯ ಡಂಗುರ
ಆಧುನಿಕ ಯುಗದಲ್ಲಿ ಕನ್ನಡದ ಅಸ್ತಿತ್ವ ಕಡಿಮೆ ಆಗುತ್ತಿದೆ. ಮೊಬೈಲ್ ಇರಲಿ. ಅಂತರ್ಜಾಲ ಇರಲಿ. ಕೆಲಸ ಇರಲಿ. ಎಲ್ಲ ಕಡೆ ಇಂಗ್ಲೀಷ್ ಬಳಕೆ ಜಾಸ್ತಿ.ಒಂದು ಕರ್ನಾಟಕದಲ್ಲಿರೋ ಅಂಗಡಿ, ಸಂಘದ ವಿವರ ನೋಡಲು ಇಂಗ್ಲೀಷ್ Yellow pages ನೋಡಿಯೇ ತೀರಬೇಕು.
ಕನ್ನಡದ ಡೈರೆಕ್ಟರಿ ಯನ್ನು ಅಂತರ್ಜಾಲದಲ್ಲಿ ಆರಂಭಿಸಲಾಗಿದೆ. ಕನ್ನಡದಲ್ಲಿ ನಿಮ್ಮ ಕಂಪನಿ, ಅಂಗಡಿ, ಬ್ಲಾಗ್, ಸರ್ವೀಸ್, ಸಂಘದ ವಿವರ ಬರೆದು ಇದರ ಬೆಳವಣಿಗೆಗೆ ಸಹಕರಿಸಿ.ಇದು ಪರೋಕ್ಷವಾಗಿ ನಮ್ಮ ಕನ್ನಡ ಭಾಷೆಯ ಬೆಳವಣಿಗೆಗೆ ಸಹಾಯವಾಗುತ್ತದೆ. ನೀವು ಡೈರೆಕ್ಟರಿಯನ್ನು ನೋಡಲು ವಿಸ್ಮಯ ಡಂಗುರ ಇಲ್ಲಿ ನೋಡಿ.
ವಿಸ್ಮಯ ಡಂಗುರ
ಮುರಿ, ಮುಱಿ
ಮುರಿ(ನಾಮಪದ)=ಒಂದು ಬಗೆಯ ಆಭರಣ.
ಮಱಿ (ಕ್ರಿಯಾಪದ)=ತುಂಡಾಗು.
ಉದಾ: ರಾಮನು ಪಾಶುಪತಾಸ್ತ್ರವನ್ನು ಮುಱಿದನು.
ಕೃದಂತಭಾವನಾಮ: ಮುಱಿತ
ಭೂತಕೃದ್ವಾಚಿ: ಮುಱಿದು
ಭವಿಷ್ಯತ್ ಕೃದ್ವಾಚಿ: ಮುಱಿವ/ಮುಱಿಯುವ
ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
ಇದೊಂದು ಹಳೆಯ ಫೋಟೊ. ಪಿಯುಸಿಯಲ್ಲಿ ತೆಗೆಸಿಕೊಂಡಿದ್ದು. ಮುಂದೆ ಓದಿ »
ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?...
ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?... ಅಳೆಯಲಾಗದು... ಅಲ್ವಾ?
ಬೆಂಗಳೂರಿನ ಗಲ್ಲಿಗಳಲ್ಲಿ ಕೆಲವನ್ನು ಹೊರತುಪಡಿಸಿ ಕನ್ನಡ ಬಳಸದ ನಾಮಫಲಕ, ಗಲ್ಲಿ, ಬಡಾವಣೆ, ಕನ್ನಡ ಬಳಸದ ಸರ್ಕಾರಿ ಕಛೇರಿಗಳು, ಕನ್ನಡ ಬಳಸದ ಸರ್ಕಾರಿ ಅಧಿಕಾರಿಗಳು ನಿಮ್ಮ ಗಮನಕ್ಕೆ ಬಂದಲ್ಲಿ ನಮಗೆ ತಿಳಿಸಿ
ಇ-ಮೇಲ್ ವಿಳಾಸ : nammakarunaadu@gmail.com
ಒಂದು ಸುಳ್ಳು
ರಾತ್ರಿ ೧೦ ಗಂಟೆ ಆಗಿತ್ತು, ಆಫೀಸಿನಿಂದ ಬಂದು ಅನ್ನ ಮಾಡಲು ರೆಡಿ ಮಾಡಿದೆ , ಹಾಗೇ ಮನೆಗೆ ಫೋನ್ ಮಾಡಿದೆ.
ಊಟ ಆಯ್ತೇನೋ ಅಂತ ಅಮ್ಮ ಕೇಳಿದ್ಳು. ನಮ್ಮ ಹೊತ್ತಲ್ಲದ ಹೊತ್ತಿನ ರಗಳೆ ಅಮ್ಮಂಗೆ ಹೇಳಿ ಯಾಕೆ ಬೇಜಾರು ಮಾಡೋದು ಅಂತ ಊಟ ಆಯ್ತು ಅಂದೆ...
ಗೆಳೆಯ
ಕೆಡುಕುಗಳ ಕಳೆದು ಒಳಿತ ಕೂಡಿಸುವ
ಗುಟ್ಟುಗಳ ಮುಚ್ಚಿಟ್ಟು ಗುಣಬಯಲಿಗೆಳೆವ
ಆಪತ್ತಿನಲಿ ಕೈ ಹಿಡಿದು ಬೇಕಾದ್ದ ಕೊಡುವ
ಇಂಥವನು ಇದ್ದರವ ನಿಜವಾದ ಗೆಳೆಯ
ಸಂಸ್ಕೃತ ಮೂಲ:
ಮುಂದೆ ಓದಿ »
ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
೧೧. "ದೇವಾಲಯಗಳ ಚಕ್ರವತ್ರಿ" ಎಂದು ಕರೆಸಿಕೊಳ್ಳುವ ದೇವಾಲಯ ಯಾವುದು?
೧೨. ಆಕಾಶವಾಣಿಯ ಮೂಲಕ ಮೊದಲು ಮಾತನಾಡಿದ ಕನ್ನಡಿಗ ಯಾರು?
೧೩. ಭಾರತೀಯ ಸಂವಿಧಾನ ಬರೆಯುವಾಗ ಇದ್ದ ಕನ್ನಡಿಗ ಯಾರು?
೧೪. ಕರ್ನಾಟಕದಲ್ಲಿರುವ ಏಕೈಕ "ದಂತ ಸಿಂಹಾಸನ" ಎಲ್ಲಿದೆ?
೧೫. ಕರ್ನಾಟಕದ" ಗಿರಿಧಾಮಗಳ ರಾಣಿ "ಯಾವುದು?
೧೬. "ನವಿಲು ತೀರ್ಥ ಅಣ್ಣೆಕಟ್ಟು" ಯಾವ ನದಿಗೆ ಕಟ್ಟಲಾಗಿದೆ? ಮುಂದೆ ಓದಿ »
ಸನ್ನಿವೇಲ್ ನಲ್ಲಿ ಸೈಕಲ್ ಹೊಡೆದಿದ್ದು
ಸನ್ನಿವೇಲ್ ನಲ್ಲಿ ಸೈಕಲ್ ಹೊಡೆದಿದ್ದು
(ಇದು ಸ೦ಪದದಲ್ಲಿ ನನ್ನ ಮೊದಲನೆ ಬರಹ. ತಪ್ಪಿದ್ದಲ್ಲಿ ಮನ್ನಿಸಿ) ಮುಂದೆ ಓದಿ »
ಡಿವಿಜಿ ರಸ್ತೆ ದೇವೇಗೌಡ್ರದ್ದಾ ?
ಡಿವಿಜಿ ರಸ್ತೆ ದೇವೇಗೌಡ್ರದ್ದಾ ? ಇದ್ದಕ್ಕಿದ್ದ ಹಾಗೆ ಈ ಪ್ರಶ್ನೆ ಈಗ ಯಾಕೆ ಬಂತು ಅಂತ ತಲೆ ಕೆಡಿಸಿಕೊಳ್ಳಬೇಡಿ. ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿ ಬಜಾರ್ ಬಳಿ ಇರುವ ಡಿವಿಜಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದೆ. ನನ್ನ ಮುಂದೆ ಇಬ್ಬರು ಹುಡುಗಿಯರು ನಡೆದುಕೊಂಡು ಹೋಗುತ್ತಿದ್ದರು. ವಯಸ್ಸು ಹೆಚ್ಚೆಂದರೆ ೨೦ರ ಆಸುಪಾಸು. ಇಲ್ಲಿ ಪ್ರಶ್ನೆ ವಯಸ್ಸಿನದ್ದಲ್ಲ. ಮುಂದೆ ಓದಿ »
