ಶಶಿ ಸಂಪಳ್ಳಿ: ಮಲೆಯ ಮಾತು
ಹೇಗೆ ಭರವಸೆ ಇಡಲಿ ಹೇಳೆ?
ಗೆಳತಿ,
ಇಲ್ಲೀಗ ಚಳಿಯ ಕಾಲ;
ಚುಮು- ಚುಮು ಬೆಳಗು,
ಮಂಜು ಕವಿದ ಬೀದಿ,
ಮಂಕಾದ ಸೂರ್ಯ,
ಜಡ್ಡುಬೀಳುವ ಮನಸಿನ ಕಾಲ.
ಆದರೆ,
ಅದಾವುದೂ ಕಾಣದು ಇಂದೇಕೋ
ಮುತ್ತಿದ ಕಾರ್ಮೋಡ,
ಅಕಾರಣ ಸುರಿವ ಸೋನೆ,
ಬಿಸಿಲಿದ್ದರೂ ಥಳ-ಥಳಿಸದ ಬೆಳಗು,..
ರಾತ್ರಿ ಇಡೀ ರೆಪ್ಪೆ ಹಚ್ಚದೆ
ಮುಂಬೈ ದಾಳಿಯ ಸುದ್ದಿ ಬರೆದು
ಬಂದವಗೆ,
ಯಾಕೋ
ಇಂದು ನಿನ್ನೆಯಂತಿಲ್ಲ…
ಕಾಲದಂತೆಯೇ.
ಅಕಾಲ ಕಾಲದ ಹೊತ್ತಿನಲ್ಲಿ
ನಾಳೆಗಳ ಮೇಲೆ ಹೇಗೆ
ಭರವಸೆ ಇಡಲಿ ಹೇಳೆ?
Categories: ಕನ್ನಡ ಪುಟಗಳು
ಹನಿ ಡ್ಯೂ ಕಣ್ಣಿನ ಹುಡುಗಿ!
836 ಕಿ.ಮೀ. ದೂರವನ್ನು ಒಂದೇ ಉಸಿರಿಗೆ ಅವಡುಗಚ್ಚಿಕೊಂಡು ಕ್ರಮಿಸಿದ್ದೆ.
ಸಿಲಿಕಾನ್ ಸಿಟಿಯಿಂದ ರಾತ್ರಿ ಎಡಿಷನ್ ವರ್ಕ್ ಮುಗಿಸಿ ಕಣ್ಣ ರೆಪ್ಪೆ ಜೋಡಿಸದೇ ಕಾರು ಏರಿದ್ದೆ. ತುಮಕೂರಿನಲ್ಲಿ ತಟ್ಟೆ ಇಡ್ಲಿ, ಕೊಪ್ಪಳದಲ್ಲಿ ಜೋಳದ ರೊಟ್ಟಿ ಊಟ, ಸಂಜೆ ಹುಮ್ನಾಬಾದ್ನಲ್ಲಿ ಟೀ ಕುಡಿದದ್ದು ಬಿಟ್ಟರೆ ಉಳಿದದ್ದೆಲ್ಲಾ ನಿದ್ದೆ, ನಡು- ನಡುವೆ ಪಿಚ್ಚಳ್ಳಿ ಶ್ರೀನಿವಾಸ್, ಮುಂಗಾರು ಮಳೆ, ಗೆಳೆಯದ ಈ ಸಂಜೆ ಯಾಕಾಗಿದೆ,… ಹೀಗೆ ಹಾಡು. ಡ್ರೈವರ್ ರವಿ ಒಂದೇ ಸಮನೆ ಕಲ್ಲುಗುಂಡಂತೆ ಕೂತು 100ರ ಮೇಲೇ ಗಾಡಿ ಓಡಿಸುತ್ತಿದ್ದರು. ಅಂತೂ ಸಂಜೆ [...]
Categories: ಕನ್ನಡ ಪುಟಗಳು
